ಕ್ರೇಪೆಲಿನ್, ಎಮಿಲ್ 	
	1856-1926. ವೂಂಟ್‍ನ ಶಿಷ್ಯರಲ್ಲಿ ಪ್ರಮುಖನಾದ ಈತ ವೃತ್ತಿಯಲ್ಲಿ ಮನೋರೋಗ ಚಿಕಿತ್ಸಕ. 1883ರಲ್ಲಿ, ಇನ್ನೂ ತನಗೆ ಇಪ್ಪತ್ತೊಂದು ವರ್ಷ ಪ್ರಾಯವಾಗಿದ್ದಾಗಲೇ ಈ ವಿಚಾರವಾಗಿ ಗ್ರಂಥವೊಂದನ್ನು ಬರೆದಿದ್ದ. ಇದು ಪ್ರಖ್ಯಾತವಾಗಿ ಹಲವಾರು ಸಂಸ್ಕರಣಗಳನ್ನು ದಾಟಿತು. ಈತ ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ 1890ರಿಂದ 1903ರ ವರೆಗೂ ಮ್ಯೂನಿಚ್‍ನಲ್ಲಿ 1903 ರಿಂದ 1926ರ ವರೆಗೂ ಪ್ರಾಧ್ಯಾಪಕನಾಗಿದ್ದ. ಮಾನಸ ಪ್ರವೃತ್ತಿಗಳ ವಿಚಾರವಾಗಿ ಹಲವಾರು ಪ್ರಬಂಧಗಳನ್ನೂ ಪುಸ್ತಕಗಳನ್ನೂ ಈತ ಪ್ರಕಟಿಸಿದ್ದಾನೆ. 										(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ